Skip to main content

ನ್ಯೂಟನ್ ನ ಚಲನೆಯ ನಿಯಮಗಳು

 💧ನ್ಯೂಟನ್ ನ ಚಲನೆಯ ನಿಯಮಗಳು💧 (Newton's laws of motion) ♠ 


ಒಂದು ವಸ್ತುವಿನ ಸ್ಥಾಯಿಸ್ಥಿತಿಯನ್ನಾಗಲಿ ಅಥವಾ ಚಲನೆಯನ್ನಾಗಲಿ ಉಂಟುಮಾಡಲು ಬೇಕಾಗುವ ಚಾಲಕಬಲವನ್ನು ತಿಳಿಸುವ ಭೌತವಿಜ್ಞಾನ ಭಾಗಕ್ಕೆ ಗತಿವಿಜ್ಞಾನ ಎಂದು ಹೆಸರು. ಇದನ್ನೇ ಚಲನಶಾಸ್ತ್ರವೆಂದು ಕರೆಯುತ್ತಾರೆ. ಗೆಲಿಲಿಯೋ ಗೆಲಿಲಿ (1564-1642) ಪ್ರಯೋಗಗಳ ಆಧಾರದಿಂದ ಅಸ್ಪಷ್ಟವಾಗಿ ಪ್ರತಿಪಾದಿಸಿದ್ದ ಚಲನೆಗಳ ಸ್ವರೂಪಗಳನ್ನು ಕ್ರೋಢೀಕರಿಸಿ ಅತ್ಯಂತ ಮಹತ್ವದ "ಪ್ರಿನ್ಸಿಪಿಯಾ ಮ್ಯಾತ್ ಮೆಟಿಕಾ ಫಿಲಾಸಫಿಯೇ ನ್ಯಾಚುರಾಲಿಸ್"(1686) ಎಂಬ ಗ್ರಂಥವನ್ನು ಸರ್ ಐಸಾಕ್ ನ್ಯೂಟನ್ ರಚಿಸಿದ.ಇದರ ಮೊದಲನೇ ಭಾಗದಲ್ಲಿ ಗೆಲಿಲಿಯೋ ಪ್ರತಿಪಾದಿಸಿದ್ದ ನಿಯಮಗಳನ್ನು ಹೆಚ್ಚು ನಿಖರವಾಗಿ ನ್ಯೂಟನ್ ಪ್ರತಿಪಾದಿಸಿದ್ದಾನೆ. ಆಧಾರ ಸೂತ್ರವು, ಸ್ವತಃ ಸಿದ್ಧ ಪ್ರಮಾಣ(Axiom) ವೆಂದು ವಿಶ್ವ ವಿಖ್ಯಾತವಾಗಿರುವ ಚಲನೆಯ ಮೂರು ನಿಯಮಗಳನ್ನು ಪ್ರತಿಪಾದಿಸಿದ ಕೀರ್ತಿ ನ್ಯೂಟನ್ ಗೆ ಸಲ್ಲುತ್ತದೆ. 


🌸 ನ್ಯೂಟನ್ ಚಲನೆಯ ಪ್ರಥಮ ನಿಯಮ : 


🍀ಜಡತ್ವ-ಬಲ 

"ಯಾವುದೇ ವಸ್ತುವಿನ ಮೇಲೆ ಬಾಹ್ಯದಿಂದ ಪ್ರೇರಣಾ ಕ್ರಿಯೆಯಾಗಲಿ, ರೋಧ ಕ್ರಿಯೆಯಾಗಲಿ ಇಲ್ಲದಿದ್ದಲ್ಲಿ ಅದು ಸದಾ ಕಾಲ ನಿಶ್ಚಲ ಸ್ಥಿತಿಯಲ್ಲಿಯೇ ಉಳಿಯುವುದು ಅಥವಾ ಸದಾಕಾಲ ವೇಗದೊಂದಿಗೆ ಸರಳರೇಖಾ ಚಲನೆ ಹೊಂದಿರುವುದು ".


🍀ಒಂದು ಕಾಯದ ಮೇಲೆ ಬಲ ಪ್ರಯೋಗವಾದಾಗ ಮಾತ್ರ ಅದು ತನ್ನ ಸ್ಥಾನವನ್ನು ಬದಲಿಸುತ್ತದೆ. ಇಲ್ಲದಿದ್ದರೆ, ಅದು ತಾನಿದ್ದ ಸ್ಥಾನದಲ್ಲಿಯೂ ಇರುತ್ತದೆ.


🍀ಅಂದರೆ ಇಲ್ಲಿ ಯಾವುದೇ ಒಂದು ವಸ್ತು ಬಲಾತ್ಕರಿಸಲ್ಪಡದೆ ಇದ್ದರೆ ಎಂದರೆ ಫಲಿತ ಬಲ ಸೊನ್ನೆ ಆದರೆ ತನ್ನ ವಿಶ್ರಾಂತ ಸ್ಥಿತಿ ಅಥವಾ ಸರಳರೇಖೆಯ ಏಕರೀತಿಯ ಚಲನೆಯ ಸ್ಥಿತಿಯಲ್ಲೆ ಮುಂದುವರೆಯುತ್ತದೆ. ಅಂದರೆ ಬಲಪ್ರಯೋಗವಾಗದ ಹೊರತು ಕೆಲಸ ಸಾಧ್ಯವಿಲ್ಲ.


🌼ಅನ್ವಯಗಳು :-


⭐️ಚಲಿಸುತ್ತಿರುವ ಬಸ್ಸ್ ನಲ್ಲಿನ ಪ್ರಯಾಣಿಕರು ಚಾಲಕ ಬ್ರೇಕ್ ಒತ್ತಿದಾಗ ಮುಂದಕ್ಕೆ ಮುಗ್ಗರಿಸುತ್ತಾರೆ.

⭐️ರತ್ನಗಂಬಳಿಯನ್ನು ತೂರಿದಾಗ ಧೂಳಿನ ಕಣಗಳು ಹೊರ ಬರುವದು.


🌸ನ್ಯೂಟನ್ ಚಲನೆಯ ದ್ವಿತೀಯ ನಿಯಮ 


🍀ಒಂದು ಕಾಯದ ವೇಗೋತ್ಕರ್ಷವು ಬಲಕ್ಕೆ ನೇರ ಅನುಪಾತದಲ್ಲಿ ಹಾಗೂ ರಾಶಿಗೆ ವಿಲೋಮ ಅನುಪಾತದಲ್ಲಿ ಇರುತ್ತದೆ.


🍀"ಯಾವುದೇ ಕಾಯದ ವೇಗೋತ್ಕರ್ಷವು ಆ ಕಾಯದ ಮೇಲೆ ಪ್ರಯೋಗವಾದ ಬಲದ ದಿಕ್ಕಿನಲ್ಲಿ ಬಲಕ್ಕೆ ನೇರ ಅನುಪಾತದಲ್ಲಿಯೂ ಕಾಯದ ರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ".


🍀ವಸ್ತುವಿನ ಮೇಲೆ ಪ್ರಯೋಗಿಸಿದ ಬಲವು ಹೆಚ್ಚಿದಷ್ಟೂ ಅದರ ವೇಗವೂ ಹೆಚ್ಚುವುದು. ವೇಗವನ್ನು ಕಡಿಮೆ ಮಾಡಲು ಎದುರು ಬಲವನ್ನು ಪ್ರಯೋಗಿಸಬೇಕು.


🍀ಎರಡನೆಯ ನಿಯಮವನ್ನು ಆಧರಿಸಿಕೊಂಡು ಬಲದ ಪ್ರಮಾಣವನ್ನು ಅಳೆಯಬಹುದು. ಆರೋಹಿತ ಬಲದ ಪ್ರಮಾಣವನ್ನು ಅಳೆಯಲು ವಸ್ತುವಿನ ರಾಶಿ ಹಾಗೂ ವೇಗ, ಎರಡೂ ಮುಖ್ಯವಾಗುತ್ತದೆ.


🍀ದ್ರವ್ಯೇಗ ಎಂದರೆ ಚಲಿಸುವ ವಸ್ತುವಿನ ದ್ರವ್ಯ ಮತ್ತು ಅದರ ವೇಗದ ಗುಣಲಬ್ಧವೆಂದು ವ್ಯಾಖ್ಯಾನಿಸಲಾಗಿದೆ .

ಒಂದು ಕಾಯದ ವೇಗೋತ್ಕರ್ಷವು ಬಲಕ್ಕೆ ನೇರ ಅನುಪಾತದಲ್ಲಿ ಹಾಗೂ ರಾಶಿಗೆ ವಿಲೋಮ ಅನುಪಾತದಲ್ಲಿ ಇರುತ್ತದೆ.


🌼ಅನ್ವಯಗಳು:


⭐️ಗ್ರಹಗಳ ಚಲನೆಯಲ್ಲಿ, 

⭐️ಕ್ರಿಕೇಟ್ ಆಟದಲ್ಲಿ, 

⭐️ಬಾವಿಯಿಂದ ನೀರು ಎತ್ತುವಾಗ.


🌸ನ್ಯೂಟನ್ ಚಲನೆಯ ತೃತೀಯ ನಿಯಮ 


🍀Action & Reaction 

Always Equal & Opposite.


"ಪ್ರತಿಯೊಂದು ಕ್ರಿಯೆಗೆ ವಿರುದ್ಧವಾಗಿ ಸಮವಾದ ಪ್ರತಿಕ್ರಿಯೆಯೊಂದು ಯಾವಾಗಲೂ ಇರುತ್ತದೆ. ಅಥವಾ ಎರಡು ಕಾಯಗಳ ಒಂದರ ಮೇಲೊಂದು ಮಾಡುವ ಪರಸ್ಪರ ಕ್ರಿಯೆಗಳು ಯಾವಾಗಲೂ ಸಮವಾಗಿರುತ್ತದೆ ಮತ್ತು ವಿರುದ್ಧ ಭಾಗಗಳತ್ತ ನಿರ್ದೇಶಿತವಾಗಿರುತ್ತವೆ".


🌼ಅನ್ವಯಗಳು

⭐️ಈಜುಗಾರ ಕೈಯಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾನೆ. ಅವನು ಮುಂದಕ್ಕೆ ಚಲಿಸುತ್ತಾನೆ.  


⭐️ಬಂದೂಕಿನಿಂದ ಗುಂಡು ಹಾರಿಸಿದಾಗ ಬಂದೂಕು ಹಿಮ್ಮುಖವಾಗಿ ಕೊಂಚ ಚಲಿಸುತ್ತದೆ. 


⭐️ ನಮ್ಮ ಕೈಯಿಂದ ಗೋಡೆಯನ್ನು ಒತ್ತಿದರೆ, ಗೋಡೆಯು ನಮ್ಮ ಕೈಯನ್ನು ಒತ್ತುವುದು. 


⭐️ನಾವು ಹೆಚ್ಚು ಒತ್ತಿದಷ್ಟು ನಮ್ಮ ಕೈ ನೋಯುವುದಕ್ಕೆ ಗೋಡೆಯ ಪ್ರತಿಬಲವೇ


⭐️ರಾಕೆಟ್ ಉಡಾವಣೆಯಲ್ಲಿ, 


⭐️ಮಾನವನ ಚಲನೆಯಲ್ಲಿ, 


⭐️ದೋಣಿಗಳ ಚಲನೆಯಲ್ಲಿ.

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...