✍️✍️*ವಿಜಯನಗರ ಸಾಮ್ರಾಜ್ಯದ ಮೇಲೆ* ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು, 👇👇👇👇
1) "ವೇದಮಾರ್ಗ ಪ್ರತಿಷ್ಠಾಪಕ" ಎಂಬ ಬಿರುದನ್ನು ಧರಿಸಿದ್ದ ವಿಜಯನಗರದ ದೊರೆ ಯಾರು?
👉 *2ನೇ ದೇವರಾಯ*, (KAS-1999)
2) ನ್ಯೂನಿಜ್ ಎಂಬ ಪೋರ್ಚುಗೀಸ್ ಪ್ರವಾಸಿಗ ಯಾರ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟನು?
👉 *ಅಚ್ಚುತರಾಯ* (KAS-1999)
3) ಕೃಷ್ಣದೇವರಾಯನು ಯಾರ ಸಮಕಾಲಿನ ಅರಸನಾಗಿದ್ದನು?
👉 *ಬಾಬರ್*(KAS-2005)
4) ವಿಜಯನಗರಕ್ಕೆ ಬೇಟಿ ನೀಡಿದ ವಿದೇಶಿಗರು( ಕಾಲಾನು ಕ್ರಮ ಕೇಳಿದ್ದ ಇವೆಲ್ಲವೂ ಸರಿಯಾಗಿವೆ.) (KAS-2017)
👉ಅಬ್ದುಲ್ ರಜಾಕ್- *ಎರಡನೇ ದೇವರಾಯ*,
ನಿಕಲೋಕೋಂಟಿ- *1ನೇ ದೇವರಾಯ*
ಫರ್ನಾವ್ ನ್ಯೋನಿಚ್- *ಅಚ್ಚುತರಾಯ*
ಬಾರ್ ಬೋಸ್- *ಕೃಷ್ಣದೇವರಾಯ*,
5) ವಿಜಯನಗರದ ಆಡಳಿತಗಾರನಾಗಿದ್ದ ಕೃಷ್ಣದೇವರಾಯನು ರಚಿಸಿದ ಅಮುಕ್ತಮೌಲ್ಯದ ಕೃತಿ ಯಾವ ಭಾಷೆಯಲ್ಲಿದೆ? ( *PSI-2020*)
👉 *ತೆಲುಗು ಭಾಷೆ*,
6) ವಿಜಯನಗರದ ಯಾವ ರಾಜನು ತನ್ನ ಸೈನಿಕರ ಯುದ್ಧ ಕೌಶಲ್ಯವನ್ನು ಹೆಚ್ಚಿಸಲು ಟರ್ಕಿಯ ಬಿಲ್ವಿದ್ಯೆ ನಿಪುಣವನ್ನು ನೇಮಕ ಮಾಡಿದ್ದನ್ನು?( *PSI-2018/2020*)
👉 *1ನೇ ದೇವರಾಯ*,
7) ರಕ್ಕಸತಂಗಡಿ/ ತಾಳಿಕೋಟೆ ಯುದ್ಧವು ಈ ವರ್ಷ ನಡೆಯಿತು,? ( *PSI-2018*)
👉 *1565ರಲ್ಲಿ*
8) ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು ಹೀಗೆ ಕರೆಯಲಾಗುತ್ತಿತ್ತು?
👉 *ರಾಜ್ಯಗಳು ಎಂದು*
9) ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು? ( *PSI /RSI-2016*)
👉 *1ನೇ ಹರಿಹರ,*
10) ಭರತೇಶ ವೈಭವದ ಕೃತಿ ಬರೆದವರು? ( *PC-2015*)
👉 *ರತ್ನಾಕರವರ್ಣಿ*,
11) ಮಲಗಿರುವ ಬುದ್ಧನ ಪರ್ವತ ಇರುವ ಜಿಲ್ಲೆ? ( *PSI-2014*)
👉 *ಯಾದಗಿರಿ*,
12) ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಹೊಗಳಿ, ಬರೆದ ಇಟಲಿಯ ಯಾತ್ರಿಕ, ( *PSI-2014*)
👉 *ನಿಕೊಲೊಡಿ ಕೌಂಟಿ.*
13) ತಾಳಿಕೋಟಿ ಯುದ್ಧವು ಯಾರ ಆಳ್ವಿಕೆಯಲ್ಲಿತ್ತು?( *PSI-2005*)
👉 *ಸದಾಶಿವರಾಯ*
14) ಕುಮಾರವ್ಯಾಸನ ನಿಜವಾದ ಹೆಸರು? ( *2002*)
👉 *ಗದುಗಿನ ನಾರಣಪ್ಪ*
15) ವಿಜಯನಗರ ಸಾಮ್ರಾಜ್ಯದ ಪತನ ಆದ ಯುದ್ಧಭೂಮಿ ಇರುವ ಸ್ಥಳ? ( *PSI-19198*)
👉 *ತಾಳಿಕೋಟೆ*,
16) ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುದಾರಿಕೆ ವ್ಯವಸ್ಥೆಯನ್ನು ಹೀಗೆಂದು ಕರೆಯುವರು? ( *FDA-2019*)
👉 *ವರಮ್*
17) ವಿಜಯನಗರ ಸಾಮ್ರಾಜ್ಯ ಅವಧಿಯಲ್ಲಿ ಇದ್ದ ಸಂತ ಯಾರು? ( *SDA-1998*)
👉 *ಕನಕದಾಸ,*
18) ತಾಳಿಕೋಟೆ ಕದನ ನಡೆದಿದ್ದು ಇವರ ನಡುವೆ? ( *SDA-2008*)
👉 *ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯ,*
19) ಕೋಟೆ ಕೋಲಾಹಲ ಎಂಬ ಬಿರುದನ್ನು ಪಡೆದಿದ್ದ ಕೆಳದಿ ಅರಸ? ( *SDAA-2013*)
👉 *ಸದಾಶಿವ ನಾಯಕ್*,
20) ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಿಸಿದ ಆಧ್ಯಾತ್ಮಿಕ ಗುರು ಯಾರು? ( *SDA-2017*)
👉 *ವಿದ್ಯಾರಣ್ಯ*,
21) ವಿಜಯನಗರದ ಯಾವ ದೊರೆ ಚೀನಾಗೆ ರಾಯಭಾರಿಗಳನ್ನು ಕಳುಹಿಸಿದನು? ( *SDA-2018*)
👉 *1ನೇ ಬುಕ್ಕ*
22) ಕೆಳದಿ ನಾಯಕರ ರಾಜಲಾಂಛನ ಏನಾಗಿತ್ತು? ( *SDA-2019*)
👉 *ಗಂಡಬೇರುಂಡ,*
23)10ನೇ ಶತಮಾನದ ಆಚಾರ್ಯ ನೇಮಿಚಂದ್ರನನ್ನು ಜನಪ್ರಿಯವಾಗಿ ಹೀಗೆ ಹೆಸರಿಸಲಾಗಿತ್ತು?( *SDA-2019*)
👉 *ಸಿದ್ದಾಂತ ಚಕ್ರವರ್ತಿ*,
24) ಕರ್ನಾಟಕ ಸಂಗೀತ ಪಿತಾಮಹ ಯಾರು? ( *SDA-2019*)
👉 *ಪುರಂದರದಾಸ,*
25) ವಿಜಯನಗರ ಸಾಮ್ರಾಜ್ಯದ ಸ್ಥಾಪಕರು( *PC-2006*)
👉 *ಹರಿಹರ ಮತ್ತು ಬುಕ್ಕ*,
26) ಕೃಷ್ಣದೇವರಾಯ ಕಾಲದ ಪ್ರಸಿದ್ಧ ವಿರೂಪಾಕ್ಷ ದೇವಾಲಯ ಎಲ್ಲಿದೆ? ( *PC-2004*)
👉 *ಹಂಪಿ*
27) ಸಂತ ಕನಕದಾಸರ ಜನ್ಮಸ್ಥಳ( *PC-2004*)
👉 *ಬಾಡಗ್ರಾಮ*
28) ವಿಜಯನಗರದ ಸಾಮ್ರಾಜ್ಯಕ್ಕೆ ರೇಷ್ಮೆ ಎಲ್ಲಿಂದ ಆಮದಾಗುತಿತ್ತು? ( *PC-2006*)
👉 *ಚೀನಾ ದೇಶದಿಂದ,*
29) ಕುಲಕುಲವೆಂದು ಹೊಡೆದಾಡದಿರಿ ಈ ಕೀರ್ತನೆಯನ್ನು ಬರೆದವರು? ( *PC-2006*)
👉 *ಕನಕದಾಸರು,*
30) ಕೃಷ್ಣದೇವರಾಯ ವಿಜಯನಗರದ ಯಾವ ರಾಜವಂಶಕ್ಕೆ ಸೇರಿದವರು? ( *PC-2017, 2018*)
👉 *ತುಳು ವಂಶಕ್ಕೆ*,
31) ಸರ್ವದರ್ಶನ ಸಂಗ್ರಹ ಕೃತಿಯ ಕರ್ತೃ,? ( *PC-2010*)
👉 *ವಿದ್ಯಾರಣ್ಯ ಗುರುಗಳು*,
32) ವಿಜಯನಗರವನ್ನು ಮರೆತು ಹೋದ ಸಾಮ್ರಾಜ್ಯ ಎಂದು ವರ್ಣಿಸಿದರು? ( *PDO-2011*)
👉 *ರಾಬರ್ಟ್ ಸಿವೆಲ್*,
33) ಸಂಗಮ ಮನೆತನದ ಸಹೋದರರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆದದ್ದು? ( *ಭೂಮಾಪಕರು-2011*)
👉 *ಹಿಂದೂ ಧರ್ಮವನ್ನು ಉಳಿಸಲು,*
34) ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರ ಎಂದವರು? ( *ಜೈಲರ್-2011*)
👉 *ಪುರಂದರದಾಸರು*
35) ಹಂಪಿಯಲ್ಲಿನ ಹಜಾರರಾಮ ದೇವಾಲಯದ ನಿರ್ಮಾಣವಾದದ್ದು ಯಾರು ಆಳ್ವಿಕೆ ಕಾಲದಲ್ಲಿ? ( *KES-2008*)
👉 *ಕೃಷ್ಣದೇವರಾಯ*
36) ಅಬ್ದುಲ್ ರಜಾಕ್ ದೇಶ( *PC ಮತ್ತು, ಪಿಯುಸಿ ಲೆಕ್ಚರ್-2012*)
👉 *ಪರ್ಷಿಯಾ*,
37) ಪರ್ಶಿಯಾದ ಅಬ್ದುಲ್ ರಜಾಕ್ ಯಾರ ಆಸ್ಥಾನಕ್ಕೆ ಭೇಟಿ ನೀಡಿದರು? ( *PC& ಪಿಯುಸಿ ಲೆಕ್ಚರ್-2012*)
👉 *2ನೇ ದೇವರಾಯ*,
38) ವಿಜಯನಗರ ಕಾಲದಲ್ಲಿ ಬಟ್ಟಳಂಕ ದೇವ ರಚಿಸಿದ ಕೃತಿ? ( *PC& ಪಿಯುಸಿ ಲೆಕ್ಚರ್-2102*)
👉 *ಕರ್ನಾಟಕ ಶಬ್ದಾನುಶಾಸನ*,
39) ಗಜಬೇಟೆಗಾರ ಬಿರುದಾಂಕಿತರು? ( *PC& ಪಿಯುಸಿ ಲೆಕ್ಚರ್2012*)
👉 *2ನೇ ದೇವರಾಯ*,
40) ವಿಜಯನಗರ ಕಾಲದಲ್ಲಿ ರಾಯರೇಖಾ ಎಂಬ ಪದ ಯಾವುದಕ್ಕೆ ಸಂಬಂಧಿಸಿದೆ? ( *PC& ಪಿಯುಸಿ ಲೆಕ್ಚರ್2012*)
👉 *ಭೂಕಂದಾಯ*,
41) ವಿಜಯನಗರ ಆಳ್ವಿಕೆಯ ರಾಜರ ಸಮ್ಮುಖದಲ್ಲಿ ಯಾವ ಹಬ್ಬದಲ್ಲಿ ನರ್ತಕಿಯರು ನರ್ತನ ಮತ್ತು ಕುಸ್ತಿ ಮಾಡುತ್ತಿದ್ದರು? ( *Group-C 2016*)
👉 *ದೀಪಾವಳಿ,*
42) ಯಾವ ಅರಸರ ಆಳ್ವಿಕೆಯಲ್ಲಿ ರಂಭಾ ಪ್ರಸಿದ್ಧ ನರ್ತಕಿ ಆಗಿದ್ದು? ( *Group-C -2016*)
👉 *ವಿಜಯನಗರ ಅರಸರ ಕಾಲದಲ್ಲಿ*,
43) ಯಡಿಯೂರು ನಲ್ಲಿನ ತೋಟದ ಸಿದ್ದಲಿಂಗೇಶ್ವರ ದೇವಾಲಯ ಅಲಂಕರಿಸಿರುವ ಪೇಟಿಂಗ್ ಯಾವುದು?
( *Group-C-2016*)
👉 *ಚತುರ್ದಿಕಲ್ಪಕರು*
44) ಯಾರ ರಾಜ್ಯದಲ್ಲಿ ದೇವಾಲಯ ನಿರ್ಮಾಣದಲ್ಲಿ ಕಲ್ಯಾಣಮಂಟಪ ಕಟ್ಟಡವು ಗಮನ ಲಕ್ಷಣವಾಗಿತ್ತು? ( *IAS-2019*)
👉 *ವಿಜಯನಗರ ಸಾಮ್ರಾಜ್ಯ,*
45) ಕೃಷ್ಣದೇವರಾಯನು ಬಾಲಕೃಷ್ಣ ದೇವಾಲಯವನ್ನು ಯಾವ ರಾಜ್ಯದ ವಿಜಯದ ಸ್ಮರಣೆಯಾಗಿ ಕಟ್ಟಿದನು? ( *RSI-2020*)
👉 *ಒಡಿಸ್ಸಾ ರಾಜ್ಯದ,*